ಗುರುದೇವತಾ ಭಜನಮಂಜರೀ

ಗಾಇಯೇ ಗಣಪತಿ ಜಗವಂದನ

ಘೋಷಃ

ವಿಘ್ನೇಶ್ವರ ಭಗವಾನ ಕೀ ಜೈ | ವಿದ್ಯಾ ಗಣಪತೀ ಕೀ ಜೈ |

ಶ್ಲೋಕಃ

ಗಜಾನನಂ ಭೂತಗಣಾದಿ ಸೇವಿತಂ
ಕಪಿತ್ಥ ಜಂಬೂಫಲಸಾರ ಭಕ್ಷಿತಮ್ |
ಉಮಾಸುತಂ ಶೋಕ ವಿನಾಶಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಮ್ ||

ಕೀರ್ತನಮ್ — 2

ರಾಗಃ : ಕಲ್ಯಾಣಿ

ತಾಲಃ : ಆದಿ

ಗಾಇಯೇ ಗಣಪತಿ ಜಗವಂದನ
ಶಂಕರ ಸುವನ ಭವಾನೀ ನಂದನ

ಸಿದ್ಧಿ ಸದನ ಗಜವದನ ವಿನಾಯಕ
ಕೃಪಾ ಸಿಂಧು ಸುಂದರ ಸಬ ನಾಯಕ

ಮೋದಕ ಪ್ರಿಯ ಮುದ ಮಂಗಲ ದಾತಾ
ವಿದ್ಯಾ ವಾರಿಧಿ ಬುದ್ಧಿ ವಿಧಾತಾ

ಮಾಂಗತ ತುಲಸೀದಾಸ ಕರ ಜೋರೇ
ಬಸಹೂ ರಾಮಸಿಯ ಮಾನಸ ಮೋರೇ

ನಾಮಾವಲಿಃ

ಭಜಿಸುವೆ ಗಜಮುಖ ದೇವನ |
ಅಜ ಸುರ ಮನು ಮುನಿ ವಂದ್ಯನ ||

ಗಜ ಚರ್ಮಾಂಬರ ಧರ ಸುತ ಗಣಪನ |
ಸುಜನೋದ್ಧಾರ ಗಣೇಶನ ||

ಸಾಂಬ ಶಿವನ ವರ ಕಂದನಾ |
ತುಂಬುರು ನಾರದ ಸೇವ್ಯನಾ |
ಬೆಂಬಿಡದನುದಿನ ಭಜಕರ ಕರುಣದಿ |
ಸಂಭ್ರಮದಲಿ ಪೊರೆವಾತನ ||

ದಶಭುಜ ಧರಿಸಿದ ದೇವನಾ |
ಪಶುಪತಿ ಈಶ ಕುಮಾರನಾ |
ವಸುಧೆಯೊಳಧಿಕ ಕುಟಚಾದ್ರಿ ಪುರದೊಳು |
ಕುಶಲದಿ ನೆಲೆಸಿದ ದೇವನಾ ||

ಹೇರಂಬ ಮೊರೆಯಾ ಸಿದ್ಧಿ ಬುದ್ಧಿ ರಮಣ |
ಗಣೇಶ ವಕ್ರತುಂಡ ಅಖಂಡ ಭಜನಾ ||

ಘೋಷಃ

ವಿಘ್ನೇಶ್ವರ ಭಗವಾನ ಕೀ ಜೈ | ವಿದ್ಯಾ ಗಣಪತೀ ಕೀ ಜೈ |