ವಿಘ್ನೇಶ್ವರ ಭಗವಾನ ಕೀ ಜೈ | ವಿದ್ಯಾ ಗಣಪತೀ ಕೀ ಜೈ |
ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ
ಸರ್ವಕಾರ್ಯೇಷು ಸರ್ವದಾ ||
ರಾಗಃ : ನಾಟ
ತಾಲಃ : ಆದಿ ತಿಸ್ರ ಗತಿ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಜಯ ಗಣೇಶ ಜಯ ಗಣೇಶ
ಜಯ ಗಣೇಶ ಪಾಹಿ ಮಾಂ
ಶ್ರೀ ಗಣೇಶ ಶ್ರೀ ಗಣೇಶ
ಶ್ರೀ ಗಣೇಶ ರಕ್ಷ ಮಾಂ
ವಿಘ್ನೇಶ್ವರ ಭಗವಾನ ಕೀ ಜೈ | ವಿದ್ಯಾ ಗಣಪತೀ ಕೀ ಜೈ |