ಗುರುದೇವತಾ ಭಜನಮಂಜರೀ

ಯೋಗಿ ಮನೆಗೆ ಬಂದ

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ

ಶ್ಲೋಕಃ

ಅನಸೂಯಾಸುತಮೀಡೇ
ವನಸಂಚಾರಪ್ರಸಕ್ತಚೇತಸ್ಕಮ್ |
ಕನಕಪ್ರದಾನನಿರತಂ
ವನಮಾಲಾಭೂಷಿತಗ್ರೀವಮ್ ||

ಕೀರ್ತನಮ್ — 2

ರಾಗಃ : ಮೋಹನ

ತಾಲಃ : ಆದಿ

ಯೋಗಿ ಮನೆಗೆ ಬಂದ
ಶ್ರೀ ಗುರುದೇವ ಮನೆಗೆ ಬಂದ |
ಕಾಲಲಿ ಪಾದುಕೆ ಕೈಯಲಿ ದಂಡ
ಬಾಲರವಿಯ ಕಳೆಯ ||

ಮಸ್ತಕದಲಿ ಜಟೆ ಶೋಭಿಸುತಲ್ಲಿ |
ಕಸ್ತೂರಿ ತಿಲಕ ಚಂದನ ಹಣೆಯಲ್ಲಿ
ವಿಸ್ತರ ನಗುಮುಖದ ||

ಜೋಲುತಿರಲು ಕೊರಳೊಳು ರುದ್ರಾಕ್ಷ |
ಜೋಳಿಗೆ ಬಗಲಲಿ ತ್ರಿಲೋಕ ರಕ್ಷ
ಕಾಷಾಯಾಂಬರದ ||

ಕುರುದ್ವೀಪದಿ ಕೃಷ್ಣೆಯ ತಟದಲ್ಲಿ |
ಸರಸದಿ ವಾಸಿಪ ಶ್ರೀಪಾದಯೋಗಿ
ಪರಮಪುರುಷ ನೃಹರಿ ||

ಭಕ್ತಕಾಮ ಕಲ್ಪದ್ರುಮನೀತ |
ನಿತ್ಯಪೂರ್ಣ ಸಚ್ಚಿದಾತ್ಮ ದತ್ತ
ಶಂಕರ ಗುರುರೂಪ ||

ನಾಮಾವಲಿಃ

ದಿಗಂಬರ ದಿಗಂಬರ ಶ್ರೀಪಾದವಲ್ಲಭ ದಿಗಂಬರ |

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ