ಗುರುದೇವತಾ ಭಜನಮಂಜರೀ

ಗುರುದತ್ತವಿಭೋ ಶ್ರೀಶದಯಾಳೋ

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ

ಶ್ಲೋಕಃ

ಆದೌ ಬ್ರಹ್ಮಾ ಮಧ್ಯೇ ವಿಷ್ಣು­ರಂತೇ ದೇವಃ ಸದಾಶಿವಃ |
ಮೂರ್ತಿತ್ರಯಸ್ವರೂಪಾಯ
ದತ್ತಾತ್ರೇಯ ನಮೋಸ್ತುತೇ |

ಕೀರ್ತನಮ್ — 1

ಗುರುದತ್ತವಿಭೋ ಶ್ರೀಶದಯಾಳೋ |
ಎರಗುವೆನು ಯತೀಶ ಮಹೇಶ ||

ಭಕ್ತರಾರ್ತಿಯ ಕಳೆದು ಶ್ರೇಷ್ಠಪದವಿಯ |
ಕೊಡುವಿಯೆಂಬ ಕೀರ್ತಿಯ | ಮೂರ್ತಿದೇವ ||

ನಿನ್ನ ಧ್ಯಾನವ ಮಾಳ್ಪ ನಾನು ಕಷ್ಟವ |
ಪಡುತಲಿಹುದು ಮಾಧವ | ಉಚಿತವೇನೋ ||

ಎಂದು ಮರಣದ ಭಯವ ಕಳೆದು ಸೌಖ್ಯದಾ |
ಪದವ ಕೊಡುವೀ ಮೋಕ್ಷದ | ಮಹಾರಾಜಾ ||

ಗಾಣಗಾಪುರಾಧೀಶ ಬಾ ಕೃಪಾಕರಾ |
ಶ್ರೀಪಾದ ಗುರುವರಾ | ದಯೆಯ ತೋರೋ ||

ಅತ್ರಿಋಷಿಸುತ ಜಗನ್ನಾಥ ಮತ್ಪಿತಾ |
ಶಿವಾನಂದಸುತನುತ | ಭಜಕ ಪೋಷ ||

ನಾಮಾವಲಿಃ

ದತ್ತಾತ್ರೇಯ ಮಮ ಶರಣಂ |
ದತ್ತನಾಥ ಮಮ ಶರಣಂ |
ತ್ರಿಗುಣಾತ್ಮಕ ತ್ರಿಗುಣಾತೀತ
ತ್ರಿಭುವನ ಪಾಲಕ ಮಮ ಶರಣಂ |

ಶಾಶ್ವತ ಮೂರ್ತೀ ಮಮ ಶರಣಂ |
ಶ್ಯಾಮ ಸುಂದರ ಮಮ ಶರಣಂ |
ಶೇಷಾಭರಣ ಶೇಷಭೂಷಣ
ಶೇಷಶಾಯಿ ಮಮ ಶರಣಂ |

ಷಡ್ಭುಜಮೂರ್ತೀ ಮಮ ಶರಣಂ |
ಷಡ್ಭುಜ ಯತಿವರ ಮಮ ಶರಣಂ |
ದಂಡಕಮಂಡಲು ಗದಾಪದ್ಮ
ಶಂಖಚಕ್ರಧರ ಮಮ ಶರಣಂ |

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ