ಗುರುದೇವತಾ ಭಜನಮಂಜರೀ

ಗುರುವಾರ ಭಜನ ಪದ್ಧತಿ

ಪ್ರತಿ ಗುರುವಾರದಂದು ಈ ಮುಂದೆ ನಿಗದಿ ಪಡಿಸಿರುವ ಕ್ರಮದಂತೆ ಭಜನೆಯನ್ನು ಮಾಡುವುದು. (1) ದೀಪಜ್ವಲನಮ್, (2) ಶ್ರೀ ಗುರುವಂದನಮ್ (3) ಶ್ರೀ ಗುರೋ ಪಾಹಿ ಮಾಂ, (4) ಭಜನೆಯ ಮಹಿಮೆ, (5) ಘೋಷವಾಕ್ಯಗಳು, (6) ಪ್ರಾರ್ಥನಾ ಶ್ಲೋಕಗಳು (7) ಜಗದ್ಗುರು ಶಂಕರ ಭಗವತ್ಪಾದರ ಕೀರ್ತನೆ, (8) ಶೃಂಗೇರಿ ಜಗದ್ಗುರು ಕೀರ್ತನೆ, (9) ಕೆಳಗೆ ಕೊಟ್ಟಿರುವ ಸಕಲ ದೇವರ ನಾಮಾವಳಿ, (10) ಜಗದ್ಗುರು ಚರಿತೆ, (11) ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ (12) ಆರತಿ ಹಾಡುಗಳು (13) ತತ್ತ್ವಪದಗಳು (14) ಮಂಗಳ ಶ್ಲೋಕಗಳು (15) “ಶಾರದೇ ಪಾಹಿ ಮಾಂ ಶಂಕರ ರಕ್ಷ ಮಾಂ” ಎಂಬ ಪ್ರಾರ್ಥನೆಯೊಂದಿಗೆ ಭಜನೆಯನ್ನು ಮುಕ್ತಾಯಗೊಳಿಸುವುದು.

ಸಕಲ ದೇವರ ನಾಮಾವಳಿ

ಜಯ ಗಣೇಶ ಗಜಾನನ
ಗಣನಾಥ ಪಾಹಿ ಮಾಮ್
ಶ್ರೀ ಗಣೇಶ ವಿನಾಯಕ
ವಿಘ್ನೇಶ್ವರ ರಕ್ಷ ಮಾಮ್
ಜಯ ಸರಸ್ವತಿ ಬ್ರಹ್ಮಪತ್ನಿ
ವಿದ್ಯಾದಾಯಿನಿ ಪಾಹಿ ಮಾಮ್
ಶಾರದಾಂಬೆ ಶೃಂಗೇರಿವಾಸಿನಿ
ಶ್ರೀಚಕ್ರನಿಲಯೆ ರಕ್ಷ ಮಾಮ್
ಜಗದ್ಗುರೋ ಶಂಕರಗುರೋ
ಕಾರುಣ್ಯಮೂರ್ತೇ ಪಾಹಿ ಮಾಮ್
ಶಂಕರಾಚಾರ್ಯ ಅದ್ವೈತಸ್ಥಾಪಕ
ಷಣ್ಮತಸ್ಥಾಪಕ ರಕ್ಷ ಮಾಮ್
ದತ್ತಾತ್ರೇಯ ಅತ್ರಿನಂದನ
ತ್ರಿಮೂರ್ತಿರೂಪ ಪಾಹಿ ಮಾಮ್
ದಿಗಂಬರ ಶ್ರೀಪಾದವಲ್ಲಭ
ನೃಸಿಂಹಸರಸ್ವತಿ ರಕ್ಷ ಮಾಮ್
ಜಗದ್ಗುರೋ ಶೃಂಗೇರಿಗುರೋ
ದಯಾಸಾಗರ ಪಾಹಿ ಮಾಮ್
ದಕ್ಷಿಣಾಮ್ನಾಯ ಶಾರದಾಪೀಠ
ಶಂಕರಾಚಾರ್ಯ ರಕ್ಷ ಮಾಮ್
ಸುಬ್ರಹ್ಮಣ್ಯ ಕಾರ್ತಿಕೇಯ
ಶರವಣಭವ ಪಾಹಿ ಮಾಮ್
ದೇವಸೇನೇಶ ವಲ್ಲೀನಾಥ
ಷಣ್ಮುಖನಾಥ ರಕ್ಷ ಮಾಮ್
ಸಾಂಬಶಿವ ಮೃತ್ಯುಂಜಯ
ಕೈಲಾಸವಾಸ ಪಾಹಿ ಮಾಮ್
ಗೌರೀಕಾಂತ ಗಿರಿಜಾಕಾಂತ
ಭವಾನಿಶಂಕರ ರಕ್ಷ ಮಾಮ್
ಅಂಬಭವಾನಿ ವಿಶಾಲಾಕ್ಷಿ
ದೇವಿಮೀನಾಕ್ಷಿ ಪಾಹಿ ಮಾಮ್
ದುರ್ಗಾದೇವಿ ಕಾಳಿಕಾಂಬ
ಅಂಬಭವಾನಿ ರಕ್ಷ ಮಾಮ್
ಸೀತಾರಾಮ ಕೋದಂಡರಾಮ
ಪಟ್ಟಾಭಿರಾಮ ಪಾಹಿ ಮಾಮ್
ರಾಧಾಕೃಷ್ಣ ರುಕ್ಮಿಣಿಕಾಂತ
ಗೋಪಿವಲ್ಲಭ ರಕ್ಷ ಮಾಮ್
ಶ್ರೀಲಕ್ಷ್ಮೀ ಮಹಾಲಕ್ಷ್ಮೀ
ಬಾಗ್ಯಲಕ್ಷ್ಮೀ ಪಾಹಿ ಮಾಮ್
ವರಲಕ್ಷ್ಮೀ ಜಯಲಕ್ಷ್ಮೀ
ಗಜಲಕ್ಷ್ಮೀ ರಕ್ಷ ಮಾಮ್
ಹರಿಹರರೂಪ ಚೈತನ್ಯರೂಪ
ಮೋಮಾರಮಣ ಪಾಹಿ ಮಾಮ್
ವೆಂಕಟೇಶ ವೈಕುಂಟನಾಥ
ಸಪ್ತಗಿರೀಶ ರಕ್ಷ ಮಾಮ್
ನರಸಿಂಹ ಪ್ರಹ್ಲಾದವರದ
ಶ್ರೀಹರಿರೂಪ ಪಾಹಿ ಮಾಮ್
ಪಾಂಡುರಂಗ ಪಂಢರಿನಾಥ
ರಖುಮಾಯಿ ವಿಠ್ಠಲ ರಕ್ಷ ಮಾಮ್
ಸ್ವಾಮಿಯೆ ಅಯ್ಯಪ್ಪ ಹರಿಹರಸುತ
ಶಬರಿಗಿರೀಶ ಪಾಹಿ ಮಾಮ್
ಆಂಜನೇಯ ರಾಮಭಕ್ತ
ರಾಮದೂತ ರಕ್ಷ ಮಾಮ್

ಶಾರದೆ ಪಾಹಿ ಮಾಂ ಶಂಕರ ರಕ್ಷ ಮಾಂ
ಶಾರದೆ ಪಾಹಿ ಮಾಂ ಶಂಕರ ರಕ್ಷ ಮಾಂ

ವಿಘ್ನೇಶ್ವರಾದಿ ಸಮಸ್ತ
ದೇವತಾ ಮೂರ್ತಿ ಕೀ ಜೈ