ಶನಿವಾರ ಅಥವಾ ಭಾನುವಾರದಂದು ಈ ಮುಂದೆ ತಿಳಿಸುವ ಕ್ರಮದಂತೆ ಭಜನೆಯನ್ನು ವಿಸ್ತಾರವಾಗಿ ಮಾಡಬೇಕು. ಭಜನಾ ಕ್ರಮದಲ್ಲಿ ಹೇಳಿರುವಂತೆ ಭಜನೆಯನ್ನು ಮಾಡುವುದಕ್ಕೆ ಒಂದುವರೆ ಘಂಟೆಕಾಲ ಬೇಕು. ಅನಿವಾರ್ಯ ಕಾರಣಗಳಿಂದ ಸಮಯದ ಅಭಾವ ಇದ್ದಲ್ಲಿ ಭಜನೆಯನ್ನು ಕೈಬಿಡದೆ ‘ಗುರುವಾರದ ಭಜನಾ ಪದ್ಧತಿಯಂತೆ’ ಭಜನೆಯನ್ನು ಮಾಡಬೇಕು.
(1) ದೀಪಜ್ವಲನಮ್ (2) ಶ್ರೀ ಗುರುವಂದನಮ್ (3) ಶ್ರೀ ಗುರೋ ಪಾಹಿಮಾಂ - (4) ಭಜನೆಯ ಮಹಿಮೆ - (5) ಘೋಷವಾಕ್ಯಗಳು - (6) ಪ್ರಾರ್ಥನಾ ಶ್ಲೋಕಗಳು, ಮುಂಬರುವ ದೇವತೆಗಳಿಗೆ ಸಾಂಗ ಕೀರ್ತನೆ (7) ಗಣೇಶ, (8) ಶಾರದಾಂಬಾ, (9) ಜಗದ್ಗುರು ಶಂಕರ ಭಗವತ್ಪಾದರು, (10) ದತ್ತಾತ್ರೇಯ, (11) ಶೃಂಗೇರಿ ಜಗದ್ಗುರುಗಳು, (12) ಸುಬ್ರಮಣ್ಯ, (13) ಶಿವ, (14) ಗೌರಿ, (15) ರಾಮ, (16) ಕೃಷ್ಣ, (17) ವರಮಹಾಲಕ್ಷ್ಮೀ, (18) ಹರಿಹರ, (19) ವೆಂಕಟೇಶ, (20) ನರಸಿಂಹ, (21) ವಿಠ್ಠಲ, (22) ಅಯ್ಯಪ್ಪ, (23) ಆಂಜನೇಯ, ನಂತರ (24) ಜಗದ್ಗುರು ಚರಿತೆ, (25) ಶ್ರೀಶಂಕರಾಚಾರ್ಯ ಅಷ್ಟೋತ್ತರ ಅರ್ಚನೆ ಮತ್ತು ನೈವೇದ್ಯ (26) ಆರತಿ ಹಾಡು - (27) ತತ್ತ್ವಪದಗಳು - (28) ಮಂಗಳ ಶ್ಲೋಕಗಳು - (29) ಶಾರದೇ ಪಾಹಿ ಮಾಂ