ಗುರುದೇವತಾ ಭಜನಮಂಜರೀ

ಪಾಹಿ ಶ್ರೀ ನೃಸಿಂಹ ಪಾಲಿಸೋ

ಘೋಷಃ

ಲಕ್ಷ್ಮೀನರಸಿಂಹ ಭಗವಾನ ಕೀ ಜೈ | ಪ್ರಹ್ಲಾದವರದನಿಗೆ ಜೈ

ಶ್ಲೋಕಃ

ಶ್ರೀಮತ್ಪಯೋನಿಧಿನಿಕೇತನ
ಚಕ್ರಪಾಣೇ
ಭೋಗೀಂದ್ರಭೋಗಮಣಿರಂಜಿತ
ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ
ಭವಾಬ್ಧಿಪೋತ
ಲಕ್ಷ್ಮೀನೃಸಿಂಹ ಮಮ ದೇಹಿ
ಕರಾವಲಂಬಮ್ ||

ಕೀರ್ತನಮ್ — 1

ರಾಗಃ : ಕೇದಾರ

ತಾಲಃ : ಆದಿ

ಪಾಹಿ ಶ್ರೀ ನೃಸಿಂಹ ಪಾಲಿಸೋ |
ವಿಹಗೇಂದ್ರ ವಾಹನ |
ಪಾಹಿ ಶ್ರೀ ನೃಸಿಂಹ ಪಾಲಿಸೊ ||

ಲೀಲ ಜಾಲ ವಿಶಾಲ ಕಲಿಮಲ |
ಶೂಲ ಖಲು ಗೋಪಾಲ ಶ್ರೀಲೋಲ |
ಯದುಬಾಲ ವನಮಾಲ |
ಶಿಶುಪಾಲ ಕಾಲನೆ | ಪಾಹಿಶ್ರೀ ||

ವೇದನಾದ ವಿನೋದ ಬೋಧ |
ಯಶೋದ ಮುದ ಮಧುರಾಧಿಕಾಧಿಪ |
ಯಾದವ ಭೂಧವ |
ಶ್ರೀಧವ ಮಾಧವ | ಪಾಹಿಶ್ರೀ ||

ಸಿಂಧು ಮಂದಿರವಿಂದ ಬಂಧುರ ನಂದ |
ಕಂದ ಮುಕುಂದ ಗೋವಿಂದ |
ಇಂದಿರೆ ಬಂಧ ಸನಂದಾದಿ ವಂದ್ಯನೆ |
ಪಾಹಿ ಶ್ರೀ ||

ವಾಸುಕೀಶಯ ದೋಷನಾಶ |
ದಿನೇಶ ಶಶಿ ಸಂಕಾಶ ಲಕ್ಷ್ಮೀಶ |
ವಾಸವ ಪೋಷ ದಶಾವೇಶಭೂಷನೆ |
ಪಾಹಿ ಶ್ರೀ ||

ಶ್ರೀ ಮನೋಮಯ ಸೋಮ ಕೋಮಲ ನಾಮ |
ಶ್ಯಾಮಲ ಲಲಾಮ ನಿಸ್ಸೀಮ |
ಕಾಮಿತ ಧಾಮ ಸಂಗ್ರಮಾದಿ ಭೀಮನೆ |
ಪಾಹಿ ಶ್ರೀ ||

ಮಂಗಲಾಂಗ ಭುಜಂಗ ಭಂಗ ವಿಹಂಗ
ತುಂಗ ತುರಂಗ ನೀಲಾಂಗ |
ರಂಗಾ ಅನಂಗ ಸುಸಂಗಾ ಕೃಪಾಂಗನೆ |
ಪಾಹಿ ಶ್ರೀ ||

ಕ್ಷೀರ ವಾರಿ ವಿಹಾರ ಸಾರ ವಿಚಾರ
ಧುರ ಕಂಠೀರವ ವೀರ
ಹಾರ ಕೇಯೂರ ಶೃಂಗಾರಾಲಂಕಾರನೇ |
ಪಾಹಿಶ್ರೀ ||

ನಾಮಾವಲಿಃ

ಜಯ ನರಸಿಂಹ ಶ್ರೀ ನರಸಿಂಹ
ಲಕ್ಷ್ಮೀನರಸಿಂಹ
ಜಯ ನರಸಿಂಹ ಶ್ರೀ ನರಸಿಂಹ
ಪ್ರಹ್ಲಾದ ನರಸಿಂಹ

ಘೋಷಃ

ಲಕ್ಷ್ಮೀನರಸಿಂಹ ಭಗವಾನ ಕೀ ಜೈ | ಪ್ರಹ್ಲಾದವರದನಿಗೆ ಜೈ