ಗುರುದೇವತಾ ಭಜನಮಂಜರೀ

ವೆಂಕಟ ದೇವಾಲಂಕೃತ ಶುಭಕರ

ಘೋಷಃ

ಸಪ್ತಗಿರಿ ಒಡೆಯ ವೆಂಕಟರಮಣ ಗೋವಿಂದ ಗೋವಿಂದ

ಶ್ಲೋಕಃ

ಕಲ್ಯಾಣಾದ್ಭುತಗಾತ್ರಾಯ
ಕಾಮಿತಾರ್ಥ ಪ್ರದಾಯಿನೇ |
ಶ್ರೀಮದ್‍ವೇಂಕಟನಾಥಾಯ
ಶ್ರೀನಿವಾಸಾಯ ತೇ ನಮಃ ||

ಕೀರ್ತನಮ್ — 1

ವೆಂಕಟ ದೇವಾಲಂಕೃತ ಶುಭಕರ |
ಪಂಕಜನಾಭನೆ ಯದುವರನೆ ||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ

ಕೋಮಲ ರೂಪನೆ ಶ್ಯಾಮಲ ವರ್ಣನೆ |
ಕಾಮಿತ ವರಗಳ ಕೊಡುವವನೆ ||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ

ಎಡಗೈಯಲಿ ಶಂಖ ಬಲಗೈಯಲಿ ಚಕ್ರ |
ನಾನಾ ರೂಪವ ಧರಿಸಿಹನೇ ||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ

ಆಲದೆಲೆಯ ಮೇಲ್ ಒರಗುವ ದೇವನೆ |
ಲಕ್ಷ್ಮೀಪತಿ ಶ್ರೀ ವೆಂಕಟನೇ ||
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ

ನಾಮಾವಲಿಃ

ಶ್ರೀನಿವಾಸ ಗೋವಿಂದ
ಶ್ರೀ ವೆಂಕಟೇಶ ಗೋವಿಂದ
ಲಕ್ಷ್ಮೀರಮಣ ಗೋವಿಂದ
ತಿರುಪತಿ ವಾಸ ಗೋವಿಂದ
ಗೋವಿಂದ ಹರಿ ಗೋವಿಂದ
ವೆಂಕಟರಮಣ ಗೋವಿಂದ

ಘೋಷಃ

ಸಪ್ತಗಿರಿ ಒಡೆಯ ವೆಂಕಟರಮಣ ಗೋವಿಂದ ಗೋವಿಂದ