ಗುರುದೇವತಾ ಭಜನಮಂಜರೀ

ವಂದನಂ ಗುರು ವೀರನೆ

ಘೋಷಃ

ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |

ಶ್ಲೋಕಃ

ಆನಂದಘನಮದ್ವಂದ್ವಂ
ನಿರ್ವಿಕಾರಂ ನಿರಂಜನಮ್ |
ಭಜೇಹಂ ಭಗವತ್ಪಾದಂ
ಭಜತಾಮಭಯಪ್ರದಮ್ ||

ಕೀರ್ತನಮ್ — 2

ರಾಗಃ : ಬೃಂದಾವನಿ

ತಾಲಃ : ಆದಿ

ವಂದನಂ ಗುರು ವೀರನೆ
ನಿಮಗೊಂದನಂ ಸುಖ ಸಾರನೆ |
ಬಂಧಮೋಕ್ಷಗಳೆಂಬ ಎರಡರ
ಸಂದು ತೋರಿದ ಧೀರನೆ ||

ತನ್ನ ನಿಜವನು ನೋಡನು
ಈ ಭಿನ್ನವಳಿಯದ ಮೂಢನು |
ನಿನ್ನ ಪಾದವ ಕಂಡ ಮನುಜನು
ಜನ್ಮವಳಿದಾರೂಢನು ||

ಹಿಂದೆ ಸುಕೃತವ ಮಾಡಿದೆ
ಅದರಿಂದ ನಿನ್ನೊಳು ಕೂಡಿದೆ |
ಬಂಧವಿಲ್ಲದ ಪೂರ್ಣಸಹಜಾನಂದ
ಪದವಿಯ ನೀಡಿದೆ ||

ತಂದೆತಾಯಿಗಳಾದರೋ
ಬಹುಮಂದಿ ಕಳೆದೇ ಹೋದರು |
ತಂದೆ ಸದ್ಗುರು ಶಂಕರಾರ್ಯನೇ
ಹಿಂದೆ ನಿಲ್ಲುವ ದೇವರು ||

ನಾಮಾವಲಿಃ

ಶಂಕರದೇಶಿಕ ಲೋಕಗುರೋ
ನಿಮಗೇ ಶರಣು ಜಗದ್ಗುರೋ
ಹಿಂದೆ ಸುಕೃತವ ಮಾಡಿದೆ
ಅದರಿಂದ ನಿನ್ನೊಳು ಕೂಡಿದೆ |
ಶಂಕರದೇಶಿಕ ಲೋಕಗುರೋ
ನಿಮಗೇ ಶರಣು ಜಗದ್ಗುರೋ
ನಿನ್ನ ಪಾದವ ಕಂಡ ಮನುಜನು
ಜನ್ಮವಳಿದಾರೂಢನು |

ಘೋಷಃ

ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |