ಗುರುದೇವತಾ ಭಜನಮಂಜರೀ

ಲೋಕಮಾತೆ ವಿಮಲ ಚರಿತೆ

ಘೋಷಃ

ಜಗದಂಬಾ ಶಾರದಾ ಮಾತಾ ಕೀ ಜೈ

ಶ್ಲೋಕಃ

ಶರದಿಂದುವಿಕಾಸಿಮಂದಹಾಸಾಂ
ಸ್ಫುರದಿಂದೀವರಲೋಚನಾಭಿರಾಮಾಮ್ |
ಅರವಿಂದಸಮಾನಸುಂದರಾಸ್ಯಾಂ
ಅರವಿಂದಾಸನಸುಂದರೀಂ ಉಪಾಸೇ ||

ಕೀರ್ತನಮ್ — 2

ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ
ಪಾಕಶಾಸನಾದಿವಂದ್ಯೆ ಕಮಲಭವನ ಮಡದಿಯೆ ||

ಕಮಲನೇತ್ರೆ ಇಂದುವದನೆ ಕೋಮಲಾಂಗಿ ಸುಂದರಿ
ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ ||

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ
ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||

ಶೃಂಗಗಿರಿಯ ಪುರನಿವಾಸೆ ಪಾಹಿ ಶಾರದಾಂಬೆಯೆ
ಸೆರಗನೊಡ್ಡಿ ಬೇಡಿಕೊಳುತ ಪಾದಪದ್ಮಕೆರಗುವೆ ||

ನಾಮಾವಲಿಃ

ವಾಣಿ ಮಾಂ ಪಾಹಿ ವೀಣಾಪಾಣಿ ಮಾಂ ಪಾಹಿ |
ವಾಣಿ ಮಾಂ ಪಾಹಿ ಪುಸ್ತಕಪಾಣಿ ಮಾಂ ಪಾಹಿ |

ಘೋಷಃ

ಜಗದಂಬಾ ಶಾರದಾ ಮಾತಾ ಕೀ ಜೈ