ಗುರುದೇವತಾ ಭಜನಮಂಜರೀ

ಬ್ರಹ್ಮಶಕ್ತಿ ಶ್ರೀ ಶಾರದೆಯೇ

ಘೋಷಃ

ಜಗದಂಬಾ ಶಾರದಾ ಮಾತಾ ಕೀ ಜೈ

ಶ್ಲೋಕಃ

ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿ ಮೇ ||

ಕೀರ್ತನಮ್ — 3

ರಾಗಃ : ಯಮನ್ಕಲ್ಯಾಣ್

ತಾಲಃ : ಆದಿ

ಬ್ರಹ್ಮಶಕ್ತಿ ಶ್ರೀ ಶಾರದೆಯೇ ಬ್ರಹ್ಮಜ್ಞಾನವ ಕೊಡುತಾಯೇ |
ವೀಣಾಪಾಣಿ ಸರಸ್ವತಿಯೇ ವಾಣಿಚತುಷ್ಟಯ ರೂಪಿಣಿಯೇ ||

ವಿದ್ಯಾದೇವಿ ಸರಸ್ವತಿಯೇ ವಿದ್ಯಾರ್ಥಿಗೆ ನೀನೇ ಗತಿಯೇ |
ಸದ್ಬುದ್ಧಿಯ ನೀಯುತೆ ಜವದೀ ಸದ್ವಿದ್ಯೆಯ ಕೊಡು ಕಡುಮುದದಿ ||

ಭಾರತಿ ನಿಜಭಾರತಿಯ ಕೊಡೆ ಭಾರತ ಭಕ್ತರ ಕಾಪಾಡೆ |
ವಾಣಿಯೇ ಪ್ರಾರ್ಥಿಸುವೆನು ಬಾರೆ ವಾಣಿ ಅಧಿಷ್ಠಾನವ ತೋರೆ ||

ಪೂರೆಯನುಭವವಂ ವೈಖರಿಯಂ ಅರುಹುವೆ ನಾ ನಿನ್ನಯಕೃಪೆಯಿಮ್ |
ಕರುಣದಿ ಕಾಯೆ ಸರಸ್ವತಿಯೇ ಪರಮ ಶಿವಾನಂದವ ನೀಯೆ ||

ನಾಮಾವಲಿಃ

ಜಗಜ್ಜನನಿ ಜಗದಂಬೇ ವಾಣಿ ಸರಸ್ವತಿ ಮಾಂ ಪಾಹಿ

ಘೋಷಃ

ಜಗದಂಬಾ ಶಾರದಾ ಮಾತಾ ಕೀ ಜೈ