ಗುರುದೇವತಾ ಭಜನಮಂಜರೀ

ತಾನೆನ್ನಬಹುದೇ ಈ ದೇಹವ (ತತ್ತ್ವಪದ)

ಕೀರ್ತನಮ್ — 7

ತಾನೆನ್ನಬಹುದೇ ಈ ದೇಹವ | ತಾನೆನ್ನಬಹುದೇ ||
ಜ್ಞಾನಮೂರುತಿ ತಾನು ಕಾಣುತೆಲ್ಲವ ನಿಲ್ಲಿ |
ಪ್ರಾಣ ಹಾರಿದ ಮೇಲೆ ಹೂಳುವೋ ಹೆಣವಿದ ||

ನಿತ್ಯನಲ್ಲೆಂದೆ ಸುಪ್ತಿಯೊಳಿದ್ದ ಸತ್ತ್ವವ ಕೊಂದೆ |
ಮೃತ್ತಿಕೆಯನು ತಂದೆ ಭೃತ್ಯ ನಾನದಕೆಂದೆ |
ಸತ್ತು ಹುಟ್ಟುತ ಬಂದೆ ಪೃಥ್ವಿಯೊಳಗೆ ಬೆಂದೆ ||

ಯಾರು ನೀ ಪೇಳೈ | ದೇಹವ ಬಿಟ್ಟು ಬೇರೆ ನೀನೇಳೈ |
ತೋರುವೀ ತನುವಿಗೆ ಬೇರೆ ನೀನಾದೊಡೆ |
ಹಾರಿತೀ ಜಗವೆಲ್ಲ ತೋರಲಿನ್ನೇನಿಲ್ಲಾ ||

ಪೊರೆಯೋ ಶ್ರೀಹರಿಯೇ | ಎಂಬುವದೊಂದೇ | ಹರಿಯ ನೀನರಿಯೇ
ಹರಿಯಿರುವಂದವನರಿಯಲು ನೀ ನಮ್ಮ |
ಗುರುಶಂಕರಾರ್ಯನೋಳು ಬೆರೆಯೋ ನರಕುರಿಯೇ ||