ಗುರುದೇವತಾ ಭಜನಮಂಜರೀ

ಶುಕ್ರವಾರದಲ್ಲಿ ಮುಸ್ಸಂಜೆ ಹೊತ್ತಲ್ಲಿ

ಘೋಷಃ

ಮಹಾಲಕ್ಷ್ಮೀ ಮಾತಾ ಕೀ ಜೈ

ಶ್ಲೋಕಃ

ದೇವಿ ಪ್ರಸೀದ ಜಗದೀಶ್ವರಿ ಲೋಕಮಾತಃ
ಕಲ್ಯಾಣಗಾತ್ರಿ ಕಮಲೇಕ್ಷಣಜೀವನಾಥೇ ।
ದಾರಿದ್ರ್ಯಭೀತಿಹೃದಯಂ ಶರಣಾಗತಂ ಮಾಂ
ಆಲೋಕಯ ಪ್ರತಿದಿನಂ ಸದಯೈರಪಾಂಗೈಃ ॥

ಕೀರ್ತನಮ್ — 4

ಶುಕ್ರವಾರದಲ್ಲಿ ಮುಸ್ಸಂಜೆ ಹೊತ್ತಲ್ಲಿ
ಲಕ್ಷ್ಮೀ ಬರುವಳು ನೋಡೆ ಕದವತೆರೆ ||

ಆಸರೆ ಕೊಡಿಸುತ್ತ ಆಸೆಯ ಬಿಡಿಸುತ್ತ
ದೋಷವ ಕಳೆವಳು ಶ್ರೀಶಕ್ತಿಯೆ
ವಾಸವ ಪೂಜಿತೆ ವಾರಿಜಾಸನ ಮಾತೇ
ವರ ತುಂಬಿ ತರುವಳು ಕದವ ತೆರೆ ||

ಮಳೆ ಬೆಳೆ ನೀಡುತ್ತಾ ಇಳೆಯನ್ನು ಪೊರೆವಳು |
ನಳಿನನಾಭನ ರಾಣಿ ಶ್ರೀರುಕ್ಮಿಣಿ
ಚರಣವ ಪಿಡಿದಂಥ ಶರಣರ ಸಲಹಲು |
ಸರಸರನೆ ಬರುವಳು ಕದವ ತೆರೆ ||

ಸುಮತಿ ಸೌಭಾಗ್ಯವ ನೀಡುವ ಮಂಗಳೇ |
ಸರಸಿಜನಾಭನ ಹೃದಯ ಸದನೆ |
ಸೆರಗೊಡ್ಡಿ ಬೇಡಲು ಉಡಿತುಂಬ ವರಗಳ |
ಹಿಡಿ ಹಿಡಿ ತರುವಳು ಕದವ ತೆರೆ ||

ನಾಮಾವಲಿಃ

ವರಲಕ್ಷ್ಮಿ ಮಾಹಾಲಕ್ಷ್ಮಿ
ಮಾಮ್ ಪಾಹಿ ಜಯ ಲಕ್ಷ್ಮಿ |

ಘೋಷಃ

ಮಹಾಲಕ್ಷ್ಮೀ ಮಾತಾ ಕೀ ಜೈ