ಗುರುದೇವತಾ ಭಜನಮಂಜರೀ

ಬ್ರೂಹಿ ಮುಕುಂದೇತಿ ಹೇ

ಘೋಷಃ

ಗೋಪಿಕಾ ಜೀವನ ಸ್ಮರಣಂ ಗೋವಿಂದ ಗೋವಿಂದ

ಶ್ಲೋಕಃ

ಕುಟಿಲಾಲಕಸಂಯುಕ್ತಂ
ಪೂರ್ಣಚಂದ್ರನಿಭಾನನಮ್ |
ವಿಲಸತ್ಕುಂಡಲಧರಂ
ಕೃಷ್ಣಂ ವಂದೇ ಜಗದ್ಗುರಮ್ ||

ಕೀರ್ತನಮ್ — 6

ರಾಗಃ : ಕುರಂಜಿ

ತಾಲಃ : ಆದಿ

ಬ್ರೂಹಿ ಮುಕುಂದೇತಿ
ಹೇ ರಸನೇ ಪಾಹಿ ಮುಕುಂದೇತಿ ||

ಕೇಶವ ಮಾಧವ ಗೋವಿಂದೇತಿ
ಕೃಷ್ಣಾನಂದ ಸದಾನಂದೇತಿ ||

ರಾಧಾರಮಣ ಹರೇರಾಮೇತಿ
ರಾಜೀವಾಕ್ಷ ಘನಶ್ಯಾಮೇತಿ ||

ಗರುಡಗಮನ ನಂದಕಹಸ್ತೇತಿ
ಖಂಡಿತದಶಕಂಧರಮಸ್ತೇತಿ ||

ಅಕ್ರೂರಪ್ರಿಯ ಚಕ್ರಧರೇತಿ
ಹಂಸನಿರಂಜನ ಕಂಸಹರೇತಿ ||

ನಾಮಾವಲಿಃ

ಗೆಜ್ಜೆಯ ಕಟ್ಟಿ ಓಡಿ ಓಡಿ ಬಾ ಬಾ
ಓ! ಗೋಪಿಯ ಕೃಷ್ಣ ಆಡಿ ಓಡಿ ಬಾ ಬಾ
ನಿನ್ನ ಪುಟ್ಟ ಪಾದ ತೋರಲೆಂದೆ ಬಾರೋ
ನಿನ್ನ ದಿವ್ಯ ನಾಮ ಪಾಡಿ ನಿಂತೆ ಬಾರೋ

ದೇವಕೀನಂದನ ರಾಧಾಜೀವನ
ಕೇಶವ ಹರೇ ಮಾಧವ
ಗೋಕುಲ ಬಾಲಕ ಓಡಿ ಬಾ ಬಾ
ಗೋಪಾಲ ಬಾಲಕ ಆಡಿ ಬಾ ಬಾ

ಪಾಂಡವರಕ್ಷಕ ಪಾಪವಿನಾಶಕ
ಕೇಶವ ಹರೇ ಮಾಧವ
ಅರ್ಜುನಸಾರಥಿ ಅಜ್ಞಾನನಾಶಕ
ಕೇಶವ ಹರೇ ಮಾಧವ
ಗೀತಾಬೋಧಕ ಓಡಿ ಬಾ ಬಾ
ಆನಂದದಾಯಕ ಆಡಿ ಬಾ ಬಾ

ಕಂಸವಿಮರ್ದನ ಕಾಳಿಂಗನರ್ತನ
ಕೇಶವ ಹರೇ ಮಾಧವ
ಆಶ್ರಿತ ವತ್ಸಲ ಆಪದ್ಬಾಂಧವ
ಕೇಶವ ಹರೇ ಮಾಧವ
ಓಂಕಾರನಾದವೇ ಓಡಿ ಬಾ ಬಾ
ಆನಂದಗೀತವ ಹಾಡಿ ಬಾ ಬಾ

ಘೋಷಃ

ಗೋಪಿಕಾ ಜೀವನ ಸ್ಮರಣಂ ಗೋವಿಂದ ಗೋವಿಂದ