ಗುರುದೇವತಾ ಭಜನಮಂಜರೀ

ಜಯ ಜನಾರ್ದನ ಕೃಷ್ಣ ರಾಧಿಕಾಪತೇ

ಘೋಷಃ

ಗೋಪಿಕಾ ಜೀವನ ಸ್ಮರಣಂ ಗೋವಿಂದ ಗೋವಿಂದ

ಶ್ಲೋಕಃ

ಕೃಷ್ಣಾಯ ವಾಸುದೇವಾಯ
ದೇವಕೀನಂದನಾಯ ಚ |
ನಂದಗೋಪಕುಮಾರಾಯ
ಗೋವಿಂದಾಯ ನಮೋ ನಮಃ ||

ಕೀರ್ತನಮ್ — 5

ರಾಗಃ : ಕುರಂಜಿ

ತಾಲಃ : ಆದಿ ತಿಸ್ರ ಗತಿ

ಜಯ ಜನಾರ್ದನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ಸುಜನ ಬಾಂಧವ ಕೃಷ್ಣ ಸುಂದರಾಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತೀ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ

ಸುರುಚಿರಾನನ ಕೃಷ್ಣ ಶೌರ್ಯವಾರಿಧೇ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭೀಪತೇ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ

ವಿಮಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಂ
ಕುವಲೈಯೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಂಬುಜಂ ಕೃಷ್ಣ ಶರಣಮಾಶ್ರಯೆ

ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ

ಕಾಮಸುಂದರ ಕೃಷ್ಣ ಪಾಹಿ ಸರ್ವದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕೀಸುತ ಕೃಷ್ಣ ಕಾರುಣ್ಯಾಂಭುದೇ
ಕಂಸನಾಶನ ಕೃಷ್ಣ ದ್ವಾರಕಾಸ್ಥಿತ

ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಂಬುಜಂ ಕೃಷ್ಣ ಶ್ಯಾಮ ಕೋಮಲಂ
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ

ಭಕ್ತದಾಸನ ಕೃಷ್ಣ ಹರಸು ನೀ ಸದಾ
ಕಾದು ನಿಂತೆನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ

ನಾಮಾವಲಿಃ

ವನಮಾಲಿ ವಾಸುದೇವ
ಜಗನ್ಮೋಹನ ರಾಧಾರಮಣ
ಶಶಿವದನ ಸರಸಿಜನಯನ
ಜಗನ್ಮೋಹನ ರಾಧಾರಮಣ

ಘೋಷಃ

ಗೋಪಿಕಾ ಜೀವನ ಸ್ಮರಣಂ ಗೋವಿಂದ ಗೋವಿಂದ