ಗುರುದೇವತಾ ಭಜನಮಂಜರೀ

ಹೇ ಜನನಿ ಜಗದಂಬೇ

ಘೋಷಃ

ಭವಾನೀ ಮಾತಾ ಕೀ ಜಯ

ಶ್ಲೋಕಃ

ಜಪೋ ಜಲ್ಪಃ ಶಿಲ್ಪಂ ಸಕಲಮಪಿ
ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಣ­ಮಶನಾದ್ಯಾಹುತಿವಿಧಿಃ |
ಪ್ರಣಾಮಃ ಸಂವೇಶಃ ಸುಖ­ಮಖಿಲಮಾತ್ಮಾರ್ಪಣದೃಶಾ
ಸಪರ್ಯಾಪರ್ಯಾಯಸ್ತವ ಭವತು
ಯನ್ಮೇ ವಿಲಸಿತಮ್ ॥

ಕೀರ್ತನಮ್ — 1

ಹೇ ಜನನಿ ಜಗದಂಬೇ
ನಿನ್ನಡಿಗೆ ಶರಣೆಂಬೆ |
ಮೂರ್ಜಗವನಾಡಿಸುವ
ಸೂತ್ರಧಾರಿಣಿ ನಿನ್ನ |
ಪೂಜಿಸುತ ವಂದಿಸುತ
ಬಾಗುವೆವು ನಾವ್ ಮುನ್ನ |

ಗಿರಿಜಾತೇ ನಿನ್ನಡಿಯ
ನಂಬಿರುವ ಭಕ್ತರಿಗೆ |
ಕೊಡೆಯಿಂದ ಮರೆಮಾಡು
ಮರೆಯಲಾರೆನು ತಾಯೆ

ಕರುಣಿಸುತ ನೀನೊಲಿಯೆ
ಕಲ್ಲು ಕರಗುವುದಮ್ಮ |
ಸುರವಿನುತೆ ನೀ ಮುನಿಯೆ
ಬ್ರಹ್ಮಾಂಡವಿರದಮ್ಮಾ

ನಾಮಾವಲಿಃ

ಪರ್ವತರಾಜಕುಮಾರಿ ಭವಾನಿ
ಭಂಜಯ ಕೃಪಯಾ ಮಮ ದುರಿತಾನಿ
ಆರಣಿ ನಾರಣಿ ಪೂರಣಿ ಕಾರಣಿ
ತ್ರಿಪುರಸುಂದರಿ ದೇವಿ ಮೀನಾಕ್ಷಿ

ಘೋಷಃ

ಭವಾನೀ ಮಾತಾ ಕೀ ಜಯ