ಗುರುದೇವತಾ ಭಜನಮಂಜರೀ

ದತ್ತ ದಿಗಂಬರನೇ

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ

ಶ್ಲೋಕಃ

ಗೋರಕ್ಷಾದ್ಯೈರ್ಮುಖ್ಯಸುಶಿಷ್ಯೈಃ ಪರಿವೀತಂ
ಗೋವಿಪ್ರಾಣಾಂ ಪೋಷಣಸಕ್ತಂ ಕರುಣಾಬ್ಧಿಮ್ |
ಗೋಲಕ್ಷ್ಮೀಶಾಂಬುಜಭವಗಿರಿಜಾಸಖರೂಪಂ
ದತ್ತಾತ್ರೇಯಶ್ರೀಪದಪದ್ಮಂ ಪ್ರಣತೋಽಸ್ಮಿ |

ಕೀರ್ತನಮ್ — 4

ದತ್ತ ದಿಗಂಬರನೇ ವಂದಿಪೆ ನಾ ಕಾಯೈ
ಕರುಣಾಸಾಗರ ವಲ್ಲಭರಾಯ ||

ವಾಡಿಯ ವಾಸ ಹೇ ಜಗದೀಶಾ
ನೀಗಿಸು ಆಶಾ ಬೇಡುವೆ ಶ್ರೀಶಾ |
ಚೈತನ್ಯಾಂಬುಧಿ ಆತ್ಮ ಸ್ವರೂಪ ||

ವಿಷಯದೊಳಿರುವ ಈ ಘನ ಪ್ರೇಮ
ನಿನ್ನೊಳಗಿರಲೈ ನಿರ್ಗುಣಧಾಮ |
ಸದ್ಗುರುನಾಥಾ ಹೇ ಅವಧೂತ ||

ಸತ್ಯ ಸ್ವರೂಪ ನಿತ್ಯಾನಂದ
ಮಿಥ್ಯಾ ಕಲ್ಪನೆ ಈ ಜಗ ನಿನ್ನೊಳು |
ಬ್ರಹ್ಮಾನಂದ ಶಂಕರ ರೂಪ ||

ನಾಮಾವಲಿಃ

ಗುರು ದತ್ತಾತ್ರೇಯ ಶ್ರೀಪಾದರಾಯ
ನರಸಿಂಹ ಸರಸ್ವತಿ ಯತಿರಾಯ |
ಗುರು ಹರಿ ಗುರು ಹರ ಗುರು ಬ್ರಹ್ಮ
ಸದ್ಗುರುವೇ ಸಾಕ್ಷಾತ್ ಪರಬ್ರಹ್ಮ ||

ಘೋಷಃ

ಅವಧೂತ ಚಿಂತನ ಶ್ರೀಗುರುದೇವ ದತ್ತ