ಗುರುದೇವತಾ ಭಜನಮಂಜರೀ

ಸತೀ ಆರ್ಯೆಯೂ

ಘೋಷಃ

ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |

ಶ್ಲೋಕಃ

ಆರ್ಯಾಂಬಾಜಠರೇ ಜನಿರ್ದ್ವಿಜಸತೀ­ದಾರಿದ್ರ್ಯನಿರ್ಮೂಲನಂ
ಸಂನ್ಯಾಸಾಶ್ರಯಣಂ ಗುರೂಪಸದನಂ
ಶ್ರೀಮಂಡನಾದೇರ್ಜಯಃ |
ಶಿಷ್ಯೌಘಗ್ರಹಣಂ ಸುಭಾಷ್ಯರಚನಂ
ಸರ್ವಜ್ಞಪೀಠಾಶ್ರಯಃ
ಪೀಠಾನಾಂ ರಚನೇತಿ ಸಂಗ್ರಹಮಯೀ
ಸೈಷಾ ಕಥಾ ಶಾಂಕರೀ ||

ಕೀರ್ತನಮ್ — 7

ಸತೀ ಆರ್ಯೆಯೂ ಶಿವಗುರೂ ತಾಯಿ ತಂದೆ
ಜಗಕ್ಕಾಗಿ ಈ ಜೋಡಿಯೋಳ್ ಹುಟ್ಟಿ ಬಂದೆ |
ಅಹೋಭಾಗ್ಯವಾ ಕಾಲಟೀ ಜನ್ಮ ಭೂಮಿ
ನಮಸ್ಕಾರ ಶ್ರೀ ಶಂಕರಾಚಾರ್ಯ ಸ್ವಾಮಿ ||

ಬಹೂಜ್ಞಾನ ವೈರಾಗ್ಯ ತಂದಿತ್ತ ನಿನ್ನಾ
ಮಹಾ ಬ್ರಹ್ಮಚರ್ಯಕ್ಕೆ ಜೋಡಾವುದಿನ್ನಾ |
ಸುಕುಮಾರ್ಯದಲ್ಲೇ ತಪಃಚಕ್ರವರ್ತೀ
ನಮಸ್ಕಾರ ಶ್ರೀ ಶಂಕರಾಚಾರ್ಯ ಮೂರ್ತೀ ||

ತುರೀಯಾಶ್ರಮಾವಾಯ್ತು ನಿನ್ನೀ ಸಜೀವಾ
ಶ್ರುತೀಯರ್ಥಕೂ ಬಂತು ಸುಸ್ಥೈರ್ಯಭಾವಾ |
ಸಮಸ್ತರ್ಗು ಸದ್ಧರ್ಮ ಸಾರಿದ್ದ ಕೀರ್ತೀ
ನಮಸ್ಕಾರ ಶ್ರೀ ಶಂಕರಾಚಾರ್ಯ ಮೂರ್ತೀ ||

ಮಹಾಮೋಹದಾಸಕ್ತಿಯ ಗೆದ್ದ ನಿನ್ನ
ಇಡೀ ಜ್ಞಾನ ವಿಜ್ಞಾನ ವೆಂಥಾ ಪ್ರಸನ್ನಾ |
ತಿಳೀ ಬುದ್ಧಿಗೇ ನಿನ್ನ ಸಾಮರ್ಥ್ಯ ಗೊತ್ತು
ಪ್ರಸಿದ್ಧಾದರಾ ಶಂಕರಾ ನಿನ್ನ ಪತ್ತು ||

ಶೃತೀ ಸ್ವಾನುಭೂತೀ ಗುರೂಕ್ತೀ ರಮಾಣ್ಯಾ
ಗುಣೀ ಪಾವನೀ ಶಂಕರೀವಾಣಿ ಪುಣ್ಯ |
ಮುಮುಕ್ಷುತ್ವವೆಲ್ಲಿದ್ದರೂ ನೀ ಶರಣ್ಯಾ
ನಮೋ ಶಂಕರಾಚಾರ್ಯ ವಿದ್ವದ್ವರೇಣ್ಯಾ ||

ಸಮಾನಾನು ಭಾವಾ ಸಮಾನ ಪ್ರತೀತೀ
ಸಮಾನಸ್ಥಿತೀ ವಿಶ್ವದಾಭಾಸರೀತೀ |
ವಿನಾಕಾರಣಾ ಭೇದದೀ ಭ್ರಾಂತಿಯೆಂದಾ
ಮಹಾಜ್ಞಾನಿ ಶ್ರೀ ಶಂಕರಾಚಾರ್ಯಪಾದಾ ||

ಇಡೀ ಭಾರತಾ ಸುತ್ತಿ ಸುಜ್ಞಾನ ಬಿತ್ತಿ
ಸಮಾಜ ವ್ಯವಸ್ಥಾ ಸ್ಥಿತೀ ಮೇಲಕೆತ್ತಿ |
ಪ್ರಪಂಚಕ್ಕೆ ನೀ ದಾರಿ ತೋರಿದ್ದ ಸೂರ್ಯಾ
ನಮಸ್ತೇ ಜಗತ್ಪೀಠದಾಚಾರ್ಯ ವರ್ಯಾ ||

ಮಠಸ್ಥಾಪಿಸೀ ವಾಸಿಸೀ ನಾಲ್ಕು ದಿಕ್ಕು
ಯಶೋ ದುಂಧುಭೀನಾದ ವೆಲ್ಲೆಲ್ಲು ಹೊಕ್ಕು |
ನಿಜಕ್ಕೀತ ಭೂಮಂಡಲಾಚಾರ್ಯನೆಂದು
ನುತೀ ಮಾಡಿತೀ ಶಂಕರಾ ದೇವರೆಂದು ||

ದಯಾಸಾಗರಾ ಶಂಕರಾ ದೀನ ಬಂಧು
ಸದಾ ಈ ಹೃದಾಕಾಶವಂ ನೆಚ್ಚಿನಿಂದು |
ಕೃಪಾ ಮಾಡಪಾ ಬೇಡಲಿನ್ನಾವುದನ್ನಾ
ಇವಾ ನಿನ್ನವಾ ನಿನ್ನ ಯೋಗೀಶ ಧನ್ಯಾ ||

ನಾಮಾವಲಿಃ

ಶಂಕರಾಚಾರ್ಯ ಗುರುನಾಥ |
ಸದ್-ವಿದ್ಯಾದಾಯಕ ಜಗನ್ನಾಥ |
ಶಂಕರಾಚಾರ್ಯ ಜಗದ್ಗುರೋ |
ಸದ್-ಧರ್ಮಸ್ಥಾಪಕ ಕಲ್ಪತರೋ |

ಘೋಷಃ

ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |