ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |
ನತ್ವಾ ಯತ್ಪದಯುಗ್ಮಂ
ವಾಚಸ್ಪತಿಗರ್ವಹಾರಿವಾಕ್ ತತಯಃ |
ಪ್ರಭವಂತಿ ಹಿ ಭುವಿ ಮೂಕಾಸ್ತಮಹಂ
ಪ್ರಣಮಾಮಿ ಶಂಕರಾಚಾರ್ಯಮ್ ||
ರಾಗಃ : ಗಂಭೀರ ನಾಟೈ
ತಾಲಃ : ಆದಿ
ವಂದಿಪೆ ನಿಮಗೆ ಗುರುನಾಥ |
ಮೊದಲೊಂದಿಪೆ ನಿಮಗೆ ಗುರುನಾಥ |
ಹಿಂದು ಮುಂದರಿಯದ ನಿಮ್ಮ
ಕಂದನಾದ ಎನ್ನ ನಿತ್ಯಾನಂದದಲ್ಲಿ
ಸೇರಿಸೋ ಗುರುನಾಥಾ |
ಈಶ ನಿಮ್ಮ ದಾಸರಿಗೆ
ದಾಸನಾದೆ ಎನ್ನ ಭವಪಾಶವನ್ನು
ಹರಿಸೋ ಗುರುನಾಥ |
ಭೇದವಾದ ವಾದಿಗಳ
ಹಾದಿಯನ್ನು ಬಿಡಿಸಿ ನಿಮ್ಮ
ಪಾದವನ್ನು ಪಾಲಿಸೋ ಗುರುನಾಥ |
ಲೀಲೆಯಿಂದ ನಿಮ್ಮ ಪಾದ
ಧೂಳೀ ಎನ್ನ ಶಿರದಮೇಲೆ
ಬೀಳುವಂತೆ ಮಾಡೋ ನೀ ಗುರುನಾಥ |
ಅಲ್ಲಿ ಇಲ್ಲಿ ಇರುವೊ ದೇವರೆಲ್ಲಾ ಬಂದು ನಿನ್ನ ಪಾದ-
ದಲ್ಲಿ ನಿಂತರಲ್ಲೋ ಶ್ರೀ ಗುರುನಾಥ |
ಗುರುವೆ ನಿಮ್ಮ ಚರಣದಲ್ಲಿ
ಕರಣವಿಟ್ಟೆನಯ್ಯಾ ಮುಂದೆ
ಮರಣವನ್ನು ಹರಿಸೋ ಗುರುನಾಥ |
ತಂದೆ ತಾಯಿ ದೈವ ನೀನೆ ಎಂದು
ನಿನ್ನ ಚರಣದೊಳು ನಿಂದು
ಬಂದು ನಿಂತೆನೋ ಗುರುನಾಥ |
ಪರಮ ನಿಮ್ಮ ಪಾದದಲ್ಲಿ
ಶಿರವನಿಟ್ಟ ನರನು ಪುರಹರನ
ಮೀರುವನು ಹೇ ಗುರುನಾಥ |
ಮಂಕನಾದೊಡೇನು ನಿಮ್ಮ ಕಿಂಕರನಾದೋಡೆ
ಗುರು ಶಂಕರನಾಗುವ ಗುರುನಾಥ ||
ಶಂಕರಾಚಾರ್ಯ ಗುರುನಾಥ
ನಿತ್ಯತೃಪ್ತ ಗುರುನಾಥ
ಶಂಕರಾಚಾರ್ಯ ಗುರುನಾಥ
ನಿಷ್ಕಲಂಕ ಗುರುನಾಥ
ಶಂಕರಾಚಾರ್ಯ ಗುರುನಾಥ
ಪುಣ್ಯಶೀಲ ಗುರುನಾಥ
ಶಂಕರಾಚಾರ್ಯ ಗುರುನಾಥ
ನಿತ್ಯತುಷ್ಟ ಗುರುನಾಥ
ಪಾಹಿ ಮಾಂ ಗುರುನಾಥ
ಶಂಕರಾಚಾರ್ಯ ಗುರುನಾಥ
ಜಗದ್ಗುರು ಶಂಕರಾಚಾರ್ಯ ಗುರು ಮಹಾರಾಜ ಕೀ ಜೈ |