ಗುರುದೇವತಾ ಭಜನಮಂಜರೀ

ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ

ಮಂಗಳಂ ಗುರು ಶ್ರೀ ಚಂದ್ರಮೌಳೀಶ್ವರಗೇ
ಶಕ್ತಿಗಣಪತಿ ಶಾರದಾಂಬೆಗೆ
ಶಂಕರಾಚಾರ್ಯರಿಗೇ ||

ಕಾಲಭೈರವಗೇ ಕಾಳಿ ದುರ್ಗಿಗೇ
ವೀರ ಧೀರ ಶೂರ ಹನುಮ
ಮಾರುತಿ ಚರಣಕ್ಕೇ ||

ಮಲ್ಲಿಕಾರ್ಜುನಗೇ ಚೆಲ್ವ ಜನಾರ್ದನಗೇ
ಅಂಬಾಭವಾನಿ ಕಂಬದ
ಗಣಪತಿ ಚಂಡಿಚಾಮುಂಡಿಗೇ ||

ವಿದ್ಯಾರಣ್ಯರಿಗೇ ವಿದ್ಯಾಶಂಕರಗೇ
ವಾಗೀಶ್ವರಿಗೇ ವಜ್ರದೇಹ
ಗರುಡಾಂಜನೇಯರಿಗೇ ||

ತುಂಗಭದ್ರೆಗೇ ಶೃಂಗನಿವಾಸಿನಿಗೇ
ಶೃಂಗೇರಿಪುರದೊಳು
ನೆಲೆಸಿರುವಂಥ ಶಾರದಾಂಬೆಗೇ ||

ಸಚ್ಚಿದಾನಂದ ಶಿವ ಅಭಿನವ
ನೃಸಿಂಹಭಾರತಿಗೇ
ಚಂದ್ರಶೇಖರಭಾರತೀ ಗುರು
ಸಾರ್ವಭೌಮರಿಗೇ
ಚಂದ್ರಶೇಖರಭಾರತೀ ಗುರು
ವಿದ್ಯಾತೀರ್ಥರಿಗೇ
ಚಂದ್ರಶೇಖರಭಾರತೀ ಗುರು
ಭಾರತೀತೀರ್ಥರಿಗೇ
ಚಂದ್ರಶೇಖರಭಾರತೀ
ವಿಧುಶೇಖರಭಾರತಿಗೇ ||