ಗುರುದೇವತಾ ಭಜನಮಂಜರೀ

ಸುಮ್ಮನೆ ಬ್ರಹ್ಮವಾಗುವನೇ (ತತ್ತ್ವಪದ)

ಕೀರ್ತನಮ್ — 1

ಸುಮ್ಮನೆ ಬ್ರಹ್ಮವಾಗುವನೇ |
ಮೂಲ ಹಮ್ಮೆಲ್ಲಾ ಲಯವಾಗಿ
ಉಳಿಯದೆ ತಾನೇ ||
ತಾನುಳಿಯದೆ ತಾನೇ ||

ಸುಮ್ಮನಿದ್ದರು ಸುಖಿಸುವನೆ |
ಇದು ನಮ್ಮದೆಂಬುದನು |
ಕೊಂದಿರುವೊ ಸಾಹಸನೆ |
ಹೊಂದಿರುವೋ ಚಿದ್ರಸನೆ |
ಸಮ್ಮಾನವನು ಮೀರಿದವನೆ |
ಮೃತ್ಯು ಸಂಹಾರಿಯಾಗಿ
ತಾಂಡವದೊಳಿರುವನೇ
ಕುಂಡಲಿಯ ಮೀರುವನೇ ||

ಪುಸ್ತಕವನು ಮುಚ್ಚಲಿಲ್ಲ |
ತಾನಾ ಪುಸ್ತಕದೊಳಗೆಲ್ಲಾ |
ಶಿವನಾಗಲಿಲ್ಲ ಕೇಶವನಾಗಲಿಲ್ಲಾ |
ಸುಸ್ತುಗಳ್ ಬಯಲಾಗಲಿಲ್ಲ
ಪರವಸ್ತುವೆಂಬುವ ನುಡಿಯೊಳಗಾಗಲಿಲ್ಲ |
ತನ್ನೊಳಗಾಗಲಿಲ್ಲ ||

ಮರಣಭೀತಿಯ ಬೇರ ಸುಡದೆ | ತನ್ನ |
ಪರಮಾನಂದವನೇ ಎಲ್ಲೆಲ್ಲಿಯುಂ ನೆಡದೆ |
ಎಲ್ಲೆಲ್ಲಿಯುಂ ನೆಡದೆ |
ಶರೀರದೊಳಭಿಮಾನ ಬಿಡದೆ |
ನಮ್ಮ ಗುರುಶಂಕರನಿಗೆ ಚಿತ್ತವನು
ಒಪ್ಪಿಸದೆ ವಿತ್ತವನು ಒಪ್ಪಿಸದೆ ||