ಗುರುಪಾದದಿ ಬೆರೆದೂ | ನೀನಿರೆ | ಮರಣದ ಭಯವಿರದೂ |
ಪರಿಪರಿ ವಿಷಯವನರಸುತ ತಿರುಗುವ | ಮರುಳಾಟವನಳಿದೂ ||
ಸಿರಿಬರಗಳು ಪೋಗಿ | ಗುರುವಿನ | ಕರುಣವೇ ಹಿತವಾಗಿ |
ಕರಣದೊಳಿರುವಾವರಣಕೆ ಸಿಲುಕದೆ | ಒಳಹೊರಗೊಂದಾಗಿ ||
ಭ್ರಾಂತಿಯ ಜಗವಳಿದೂ | ಈ ಮಲಯಂತ್ರವ ಕಳೆದುಳಿದು |
ಕಾಂತಾ ಕನಕದ ಚಿಂತೆಯ ಕಳೆದುಪಶಾಂತಿಯ ಗುಣ ಬಲಿದೂ ||
ಕುರುಡರ ನಡೆ ಬಿಟ್ಟು | ದೃಷ್ಟಿಯ | ಪರಮಾರ್ಥದೊಳಿಟ್ಟು |
ಕರಣವ ಬೆಳಗಿಪ | ಗುರು ಶಂಕರನಿಗೆ | ಪೆರೆತೆಂಬುದ ಸುಟ್ಟು ||