ಗುರುದೇವತಾ ಭಜನಮಂಜರೀ

ಶ್ರೀ ನೃಸಿಂಹ ಪಾಹಿ

ಘೋಷಃ

ಲಕ್ಷ್ಮೀನರಸಿಂಹ ಭಗವಾನ ಕೀ ಜೈ | ಪ್ರಹ್ಲಾದವರದನಿಗೆ ಜೈ

ಶ್ಲೋಕಃ

ಸಂಸಾರಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ
ಕರುಣಾನಿಧೇ ಮಾಮ್ |
ಪ್ರಹ್ಲಾದಖೇದಪರಿಹಾರಪರಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ
ಕರಾವಲಂಬಮ್ ||

ಕೀರ್ತನಮ್ — 3

ಶ್ರೀ ನೃಸಿಂಹ ಪಾಹಿ
ಮೋಹ ಪಟಲ ನಾಶನ |
ಖಳ ಹಿರಣ್ಯಕಶಿಪು ಕಠಿಣ
ಹೃದಯ ದಾರಣ |
ವರ ಪ್ರಹ್ಲಾದೋದ್ಧರಣ ಪಾವನ |
ಉದ್ಧರಣ ಪಾವನ ||

ಘೋರ ಸಂಸಾರ ಪಾಶಮಪನ­ಯಾಶು ಮೇ |
ಕಾಮ ಕ್ರೋಧ ಲೋಭ ಮೋಹ
ಮದ ವಿಮರ್ದನ |
ಮಹಿಮಾತೀತಾನಂತ ವೈಭವ |
ಆನಂತ ವೈಭವ ||

ಶರಣಮಸ್ತು ತೇಂಘ್ರಿಯುಗಲ­ಮಿಹ ಸುರೇಶ್ವರ |
ಅರುಣ ಕಿರಣ ತರಣಿ ಕೋಟಿ
ಕಿರಣ ಭಾಸ್ವರ |
ಚರಣಾಂಭೋಜ ಪ್ರಣತ ಸುಖಕರ |
ಸುಪ್ರಣತ ಸುಖಕರ ||

ಸದ್ರಜಸ್ತಮೋಗುಣೋನ ಭಕ್ತ ವತ್ಸಲ |
ಭಕ್ತಿ ಯುಕ್ತಿ ವರದ ಶಕ್ತಿ ಮುಕ್ತಿ ಸುಚರಿತ |
ಪರಿಪಾಹೀಶ ಮಹೀವರಾರ್ಚಿತ ||
ಮಹೀವರಾರ್ಚಿತ ||

ನಾಮಾವಲಿಃ

ನರಸಿಂಹ ಲಕ್ಷ್ಮೀನರಸಿಂಹ
ನರಸಿಂಹ ಅಭಯಂ ದೇಹಿ ಸ್ವಾಮಿ
ನರಸಿಂಹ ಕೃಪೆ ತೋರು ತಂದೆ
ನರಸಿಂಹ ನಿನಗೆ ಶರಣು ಎಂದೆ

ಘೋಷಃ

ಲಕ್ಷ್ಮೀನರಸಿಂಹ ಭಗವಾನ ಕೀ ಜೈ | ಪ್ರಹ್ಲಾದವರದನಿಗೆ ಜೈ