ಗುರುದೇವತಾ ಭಜನಮಂಜರೀ

ರಾಮ ರಾಮ ರಾಮ ಸೀತಾ

ಘೋಷಃ

ಜಾನಕೀ ಕಾಂತ ಸ್ಮರಣಂ ಜಯ ಜಯ ರಾಮ ರಾಮ

ಶ್ಲೋಕಃ

ನಮಃ ಸತಾಂ ಶರಣ್ಯಾಯ
ಜಗನ್ಮಂಗಲಮೂರ್ತಯೇ ।
ಸೀತಾಕಾಂತಾಯ ರಾಮಾಯ
ಪವಿತ್ರಾದ್ಭುತಕೀರ್ತಯೇ ॥

ಕೀರ್ತನಮ್ — 9

ರಾಮ ರಾಮ ರಾಮ
ಸೀತಾ ರಾಮ ರಾಮ ಅನ್ನಿರಿ
ರಾಮಸ್ಮರಣೆಯ ಹೊರತು
ಕಾಲ ವ್ಯರ್ಥ ಕಳೆಯಬೇಡಿರಿ

ಸ್ನಾನಸಂಧ್ಯಾ ನಿತ್ಯನೇಮ
ಜಪವತಪವ ಮಾಡಿರಿ
ಸಾಯೋಸಂಕಟ ಬಂದರೂ
ಪರ-ಧರ್ಮ ಹಿಡಿಯಬೇಡಿರಿ

ತಂದೆ ತಾಯಿ ಬಂಧು ಬಳಗ
ಮಿಥ್ಯವೆಂದು ತಿಳಿಯಿರಿ
ನಂದು ನಾನೆಂದೆಂಬ ಮೋಹವ
ಬಿಟ್ಟು ರಾಮನ ಭಜಿಸಿರಿ

ಕಾಮ ಕ್ರೋಧ ಮೋಹ ಬಿಟ್ಟು
ಮನಸು ಜಳಜಳಮಾದಿರಿ
ಕಾಯವಾಚ ಮನಸಿನಿಂದ
ಗುರುವಿಗೆ ಶರಣ್ಹೋಗಿರಿ

ಪರರನಾರಿ ಪರರದ್ರವ್ಯ
ನರಕವೆಂದು ತಿಳಿಯಿರಿ
ಚಿಂತೆಯಿಲ್ಲದೆ ರಾಮನ
ಚಿಂತಿಸಿ ಜನನ ಮರಣ ನೀಗಿರಿ

ಭಕ್ತಿಭಾವದಿಂದ ಸದ್ಗುರು
ಹರಿಯು ಹರನೆಂದರಿಯಿರಿ
ಗುರುವಿನಪ್ಪಣೆಯಂತೆ ನಡೆದರೆ
ಮುಕ್ತಿಯೆಂದು ತಿಳಿಯಿರಿ

ದಿವಸರಾತ್ರೆ ಸಾಧುಸಂತರ
ಸಂಘವನ್ನೇ ಬಯಸಿರಿ
ಬ್ರಹ್ಮಾನಂದರು ಸಾರಿಹೇಳುವ
ರಾಮನಾಮವ ಜಪಿಸಿರಿ

ನಾಮಾವಲಿಃ

ಅಯೋಧ್ಯವಾಸಿ ರಾಮ ರಾಮ
ದಶರಥನಂದನ ರಾಮ ರಾಮ
ಜಾನಕಿಜೀವನ ಪತಿತ ಪಾವನ
ಸೀತಾ ರಾಮ ರಾಮ

ಘೋಷಃ

ಜಾನಕೀ ಕಾಂತ ಸ್ಮರಣಂ ಜಯ ಜಯ ರಾಮ ರಾಮ