ಜಾನಕೀ ಕಾಂತ ಸ್ಮರಣಂ ಜಯ ಜಯ ರಾಮ ರಾಮ
ನಮಃ ಕೋದಂಡಹಸ್ತಾಯ
ಸಂಧೀಕೃತಶರಾಯ ಚ |
ಖಂಡಿತಾಖಿಲದೈತ್ಯಾಯ
ರಾಮಾಯಾಪನ್ನಿವಾರಿಣೇ ||
ರಾಗಃ : ಸಿಂಧುಭೈರವಿ
ತಾಲಃ : ಆದಿ ತಿಸ್ರ ಗತಿ
ಸದಾ ಎನ್ನ ನಾಲಿಗೆಯಲಿ
ಬರಲಿ ರಾಮನಾಮ
ಬರಲಿ ರಾಮನಾಮ
ಸದಾ ಬರಲಿ ಕೃಷ್ಣನಾಮ
ಸತತ ನಿನ್ನ ಚರಣಸೇವೆ
ಎನಗೆ ಕೋಡು ರಾಮ
ನಿನ್ನ ನಾಮ ನೆನೆವುದಕೆ
ಎನಗೆ ಮನವ ನೀಡೋ
ನಾ ನಿನ್ನ ನಂಬಿದೆ
ಶ್ರೀರಾಮಚಂದ್ರ ಕಾಯೋ
ರಾಮ ನಿನ್ನ ನಾಮ ರೂಪ
ನೇಮದಿಂದ ಭಜಿಸುವೆ
ಕಾಮಿತಾರ್ಥವೀವ ಮೂಲ
ನಾರಾಯಣ ನಮಿಪೆನು
ರಘುಪತೇ ರಾಮಚಂದ್ರ
ರಾಘವ ದಯಾನಿಧೇ
ಜಾನಕೀ ಕಾಂತ ಸ್ಮರಣಂ ಜಯ ಜಯ ರಾಮ ರಾಮ