ಭವಾನೀ ಮಾತಾ ಕೀ ಜಯ
ಸರ್ವಮಂಗಲಮಾಂಗಲ್ಯೇ
ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ ||
ಅಂಬಪಾಲಿಸಂಬಪಾಲಿಸೇ ತಾಮ್ರಗೌರಿ
ಬೆಂಬಿಡದೆ ಎನ್ನ ರಕ್ಷಿಸೇ ||
ಎಷ್ಟು ದೂರದಿಂದ ಬಂದೆನೇ,
ಅಂಬ ನಿನ್ನ ಕೀರ್ತಿಯನ್ನು ಕೇಳಿನಿಂದೆನೆ
ಮೂರ್ತಿಯನ್ನು ತೋರಿಸಮ್ಮ
ಮುಕ್ತಿಪಥವ ಪಾಲಿಸಮ್ಮ
ಕರ್ತೃ ಶಂಕರನ ರಾಣಿ
ಕಾಂತೆಯನ್ನು ರಕ್ಷಿಸಮ್ಮ ||
ಹಸ್ತಕಡಗ ಹೊನ್ನಕಂಕಣಾ,
ಒಪ್ಪುತಿರುವ ಮುತ್ತಿನ್ವಂಕಿ ತೋಳಬಾಪುರಿ
ಮುತ್ತಿನೋಲೆ ಹೊನ್ನಿನ
ಮೂಗುತಿಯ ಥಳಥಳಿಸಿ
ಕರ್ತೃ ಶಂಕರನರಾಣಿ
ಕಾಂತೆಯನ್ನು ರಕ್ಷಿಸಮ್ಮ ||
ಚರಣದಂದಿಗೆ ಬೆರಳಮುದ್ರಿಕೆ,
ಘಲಿರೆಂದು ಬರುವ ಬರವ ಎನಗೆ ತೋರಿಸೆ
ನಡುವಿನ ಒಡ್ಯಾಣ ಹೊಳೆವ
ನಿರಿಯ ಪೀತಾಂಬರವು ಅಲುಗೆ
ದೃಢದಿ ಭಕ್ತರನ್ನು ಪೊರೆವ
ಪರಮಪಾವನೆ ಮೋಹನ್ನೆ ||
ದೇಶದಧಿಕ ಎನಿಸಿ ಮೆರೆಯುವ,
ಗೋಕರ್ಣ ಆ ಪುರದಿ ನೆಲೆಸಿ ನಿಂತಿಹ
ಕಾಶಿಗಿಂತ ಅಧಿಕವೆಂದು
ತ್ರಾಸಿನಲ್ಲಿ ತೂಗುತಿರುವ
ಈಶನಾ ರಾಣಿಯೇ
ಸಂತೋಷದಿಂದ ಸಲಹೆ ಬಂದು ||
ಶಂಕರಿ ಕರುಣಾಕರಿ
ಜಗದೀಶ್ವರಿ ಪರಮೇಶ್ವರಿ
ಭವಾನೀ ಮಾತಾ ಕೀ ಜಯ