ಗುರುದೇವತಾ ಭಜನಮಂಜರೀ

ವರಗುರು ಭಾರತೀತೀರ್ಥ

ಘೋಷಃ

ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠ ಜಗದ್ಗುರು ಮಹಾರಾಜ ಕೀ ಜೈ|ಶೃಂಗೇರಿ ಜಗದ್ಗುರು ವಿದ್ಯಾರಣ್ಯ ಗುರು ಮಹಾರಾಜ ಕೀ ಜೈ|ಜಗದ್ಗುರು ನೃಸಿಂಹಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವನೃಸಿಂಹ ಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಚಂದ್ರಶೇಖರಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಅಭಿನವ ವಿದ್ಯಾ ತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಭಾರತೀತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ವಿಧುಶೇಖರ ಭಾರತೀ ಗುರು ಮಹಾರಾಜ ಕೀ ಜೈ|

ಶ್ಲೋಕಃ

ಭವಪಾದಾಂಬುಜಾಸಕ್ತಂ
ಭವನಂ ಗುಣಸಂಪದಾಮ್ ।
ಭವವಿಚ್ಛಿತ್ತಯೇ ಭಕ್ತ್ಯಾ
ಭಾರತೀತೀರ್ಥಮಾಶ್ರಯೇ ॥

ಕೀರ್ತನಮ್ — 10

ರಾಗಃ : ಖರಹರಪ್ರಿಯಾ

ತಾಲಃ : ಆದಿ

ವರಗುರು ಭಾರತೀತೀರ್ಥರ ನಂಬಿರುವ
ಯಾರಿಗೂ ಬವಣೆಯು ಬಾರದು |
ಶಾರದೆಗೆ ನಮಿಪ ವೇದ ಪಾರಾಂಗತ
ಬೀರುತ ಕರುಣೆಯ ಹರಸುವರು ಎಂದೂ ||

ಶಾಂಕರ ದಕ್ಷಿಣ ಪೀಠಾಧೀಶರು
ಶಂಕರ ರೂಪರು ಚಿನ್ಮಯರು
ಸನ್ಮತಿ ನೀಡುತ ಮಾನವ ಕುಲಕೆಲ್ಲಾ
ಉನ್ನತಿ ತೋರುವ ಪಾಲಕರು |

ಕಾಷಾಯಾಂಬರ ಧರಿಸಿಹ ಗುರುವರ
ಭಾಷಾಜ್ಞಾನಿಯೂ ಗುಣನಿಧಿಯೂ ||

ವಿದ್ಯಾತೀರ್ಥರ ಕರಸಂಜಾತರು
ವಿದ್ಯಾವಿಶಾರದ ಶ್ರೀಯುತರು
ಭೂಸುರ ಪೂಜಿತ ಜನಕೋಟಿ
ವಂದಿತ ನೇಸರಕಾಂತಿಯ ಪ್ರಭೆಯವರು |

ಕಾಷಾಯಾಂಬರ ಧರಿಸಿಹ ಗುರುವರ
ಭಾಷಾಜ್ಞಾನಿಯೂ ಗುಣನಿಧಿಯೂ ||

ನಾಮಾವಲಿಃ

ಭಾರತೀ ಸ್ವರೂಪರೇ ಭುವನಗುರೋ ಗುರು-
ಭಾರತೀತೀರ್ಥರೇ ನನ್ನ ಕಾಯೋ
ಕಾರುಣ್ಯ ಮೇರುವೆ ಶೃಂಗೇರಿ ಗುರೋ
ಕರುಣಾ ಲೇಶವ ನನಗೂ ಕರುಣಿಸೋ