ಗುರುದೇವತಾ ಭಜನಮಂಜರೀ

ಶರಣು ವಿದ್ಯಾರಣ್ಯ

ಘೋಷಃ

ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠ ಜಗದ್ಗುರು ಮಹಾರಾಜ ಕೀ ಜೈ|ಶೃಂಗೇರಿ ಜಗದ್ಗುರು ವಿದ್ಯಾರಣ್ಯ ಗುರು ಮಹಾರಾಜ ಕೀ ಜೈ|ಜಗದ್ಗುರು ನೃಸಿಂಹಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವನೃಸಿಂಹ ಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀಚಂದ್ರಶೇಖರಭಾರತೀ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಅಭಿನವ ವಿದ್ಯಾ ತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ಭಾರತೀತೀರ್ಥ ಗುರು ಮಹಾರಾಜ ಕೀ ಜೈ|ಜಗದ್ಗುರು ಶ್ರೀ ವಿಧುಶೇಖರ ಭಾರತೀ ಗುರು ಮಹಾರಾಜ ಕೀ ಜೈ|

ಶ್ಲೋಕಃ

ವಿದ್ಯಾನಗರನಿರ್ಮಾಣ­ವಿದ್ಯಾಶತವಿಶಾರದಃ ।
ವಿದ್ಯಾರಣ್ಯಮಹಾಯೋಗೀ
ತಸ್ಮೈ ಶ್ರೀಗುರವೇ ನಮಃ ॥

ಕೀರ್ತನಮ್ — 2

ಶರಣು ವಿದ್ಯಾರಣ್ಯ ಯತಿವರ
ಶರಣು ನತಜನರಕ್ಷಕ
ಶರಣು ಶಾರದಾಪೀಠದಧಿಪರೆ
ಶರಣು ಧರ್ಮೋದ್ಧಾರಕ

ಬಾಲ್ಯದಲ್ಲಿಯೇ ಶೃಂಗಗಿರಿಯಲಿ
ಯೋಗಿ ವಿದ್ಯಾತೀರ್ಥರ
ಕರಾಂಬುಜಸಂಜಾತರಾದಿರಿ
ತೊರೆದು ಲೋಕದ ಬಂಧವ

ತೆರಳಿ ಕಾಶಿಗೆ ತಪವ ಮಾಡುತ
ವಿದ್ಯೆ ಬೆಳಕನು ಪಸರಿಸಿ
ಮರಳಿ ಬಂದಿರಿ ಲೋಕಸಂಗ್ರಹ
ಕಾರ್ಯಕಾಗಿಯೆ ದಯದಲಿ

ಗುರುಗಳಾಣತಿಯಿಂದ ಧರ್ಮದ
ರಕ್ಷೆಗಾಗಿಯೆ ರಾಜ್ಯವ
ವಿಜಯನಗರದಿ ಸ್ಥಾಪಿಸುತ್ತಲಿ
ಜನರ ಹಿತವನು ಕಾಯ್ದಿರಿ

ರಾಜ್ಯಪಾಲನೆಗಾಗಿ ಚಿನ್ನದ
ಮಳೆಯ ಸುರಿಸಿದ ವಂದ್ಯರೇ
ಹಕ್ಕ ಬುಕ್ಕರ ರಾಜರಾಗಿಸಿ
ಇಹ ವಿರಕ್ತಿಯ ಮೆರೆದಿರಿ

ವೇದಭಾಷ್ಯವ ರಚಿಸಿ ಲೋಕಕೆ
ತತ್ತ್ವಮಾರ್ಗವ ಬೋಧಿಸಿ
ಪಂಚದಶಿ ಮೊದಲಾದ ಉತ್ತಮ
ಗ್ರಂಥರಾಶಿಯ ನಿರ್ಮಿಸಿ

ಜಗದ ಗುರು ಶ್ರೀ ಶಂಕರಾರ್ಯರ
ನಿಜಚರಿತ್ರೆಯ ವಿರಚಿಸಿ
ಜನಗಳಜ್ಞಾನವನು ನೀಗಿಸಿ
ಲೋಕಪೂಜ್ಯತೆ ಪಡೆದಿರಿ

ದೇಶದೆಲ್ಲೆಡೆ ಧರ್ಮಜ್ಯೋತಿಯ ಬೆಳಗಿ
ಮಹಿಮೆಯ ಸಾರುತ
ಶೃಂಗಗಿರಿಯದ್ವೈತಪೀಠದಿ
ಮೆರೆದ ಯತಿವರ, ನಮಿಸುತ

ಶರಣು ಬಂದಿಹ ಮೂರ್ಖಭಕ್ತನ
ಸಲಹಿರೆನ್ನುತ ಬೇಡುತ
ನಿಮ್ಮ ಸ್ತುತಿಯನು ಭಕ್ತಿಯಿಂದಲಿ
ಮಾಡಿ ಚರಣಕೆ ವಂದಿಪೆ

ನಾಮಾವಲಿಃ

ಜಗದ್ವಂದ್ಯ ಜಗದ್ಗುರೋ
ವಿದ್ಯಾರಣ್ಯ ಗುರುನಾಥ
ವಿದ್ಯಾರಣ್ಯ ಗುರುನಾಥ
ಧರ್ಮರಕ್ಷಕ ಗುರುನಾಥ
ಧರ್ಮರಕ್ಷಕ ಗುರುನಾಥ
ಶಾಸ್ತ್ರಪೋಷಕ ಗುರುನಾಥ
ಶಾಸ್ತ್ರಪೋಷಕ ಗುರುನಾಥ
ಜ್ಞಾನದಾಯಕ ಗುರುನಾಥ