ಗುರುದೇವತಾ ಭಜನಮಂಜರೀ

ಭಜನೆ ಮಹಿಮೆ

ಭಜನೆಗೆ ಪ್ರಾರಂಭ ಮಾಡೋಣ
ಆಗಲಿ ಮೊದಲು ರಾಮಸ್ಮರಣೆ ||

ರಾಮ ಭಜನೆಗೆ ನಿಂತಾಗ
ಮಾಡಬೇಕು ಲಜ್ಜಾ ತ್ಯಾಗ ||

ತಾಳ ಸ್ವರವು ಹೇಗೋ ಇರಲಿ
ರಾಮನಾಮ ಬಾಯಿಗೆ ಬರಲಿ ||

ಲಕ್ಷ್ಯ ಬೇಡ ರಾಗದ ಕಡೆಗೆ
ಭಕ್ತಿ ತುಂಬಲಿ ಹೃದಯದೊಳಗೆ ||

ರಾಮನಾಮದ ರುಚಿಯು ಬಹಳಾ
ಮಹಾಭಾಗವತರೂ ಮರುಳಾ ||

ಶ್ರೀರಾಮ ಜಯ ರಾಮ ಜಯ ಜಯ ರಾಮ
ಶ್ರೀರಾಮ ಜಯ ರಾಮ ಜಯ ಜಯ ರಾಮ

ಶಾರದೇ ಪಾಹಿ ಮಾಂ ಶಂಕರ ರಕ್ಷ ಮಾಂ
ಶಾರದೇ ಪಾಹಿ ಮಾಂ ಶಂಕರ ರಕ್ಷ ಮಾಂ