ಮಹಾಲಕ್ಷ್ಮೀ ಮಾತಾ ಕೀ ಜೈ
ಅಂಗಂ ಹರೇಃ ಪುಲಕ ಭೂಷಣಮಾಶ್ರಯಂತೀ
ಭೃಂಗಾಂಗನೇವ ಮುಕುಲಾಭರಣಂ ತಮಾಲಮ್
ಅಂಗೀಕೃತಾಖಿಲವಿಭೂತಿರಪಾಂಗಲೀಲಾ
ಮಾಂಗಲ್ಯದಾಸ್ತು ಮಮ
ಮಂಗಲದೇವತಾಯಾಃ ||
ರಾಗಃ : ಕೇದಾರಗೌಳ
ತಾಲಃ : ತ್ರಿಪುಟ
ಬಾರೆ ಶ್ರೀಲಕ್ಷ್ಮೀದೇವೀ ಕಾರುಣ್ಯದೀ ||
ಘೋರ ಚಿಂತೆಯೊಳು
ಸಂಸಾರಿ ನಾನಿರುವೆನೆ |
ದಾರಿದ್ರ್ಯ ಕೆಟ್ಟದು
ಯಾರು ಕೇಳರು ತಾಯೇ ||
ಲೋಕದೊಳಿಹೆ ನಾನು
ಲೋಕ ಮಾತೆಯು ನೀನು |
ಯಾಕೆ ಬಳಲಿಸುವಿಯೇ
ಸಾಕಿನ್ನು ಬೇಗನೇ ||
ಹರಿ ಜಾಯೆ ನೀ ಬ್ರಹ್ಮ
ಬರಹವ ತಪ್ಪಿ ಸಿ |
ಕರುಣದಿಂದೆನಗೀಗ
ಪರಮೈಶ್ವರ್ಯವ ಕೊಡೇ ||
ಆನೆ ಕುದುರೆ ಸಹ
ಯಾನದಿ ಕುಳಿತೀಗ |
ಬಾ ನನ್ನ ತಾಯಿಯೇ
ನಾನಾರತಿಯ ಮಾಳ್ಪೇ ||
ಪಲ್ಲಕ್ಕಿ ಇಳಿದು ಬಾ
ಮೆಲ್ಲನೀ ಮನೆಯೋಳು |
ಫುಲ್ಲ ಲೋಚನೆಯೇ ನೀ
ನಿಲ್ಲೀ ಕೂಡೇ ತಾಯೇ ||
ಇಂದಿರೆ ನೀದಯದಿಂದ
ಬಂದಿಯಾ ದೇವೀ |
ಇಂದು ಪೂಜಿಪೆ
ಶಿವಾನಂದನ ಜಾಯೆಯೇ ||
ಲಕ್ಷ್ಮೀ ಮಾಂ ಪಾಹಿ
ಮಹಾಲಕ್ಷ್ಮೀ ಮಾಂ ಪಾಹಿ
ಲಕ್ಷ್ಮೀ ಮಾಂ ಪಾಹಿ
ವರಲಕ್ಷ್ಮೀ ಮಾಂ ಪಾಹಿ
ಲಕ್ಷ್ಮೀ ಮಾಂ ಪಾಹಿ
ಜಯಲಕ್ಷ್ಮೀ ಮಾಂ ಪಾಹಿ
ಲಕ್ಷ್ಮೀ ಮಾಂ ಪಾಹಿ
ಭಾಗ್ಯಲಕ್ಷ್ಮೀ ಮಾಂ ಪಾಹಿ
ಮಹಾಲಕ್ಷ್ಮೀ ಮಾತಾ ಕೀ ಜೈ